Bible 2 India Mobile
[VER] : [KANNADA]     [PL]  [PB] 
 <<  Psalms 114 >> 

1ಇಸ್ರಾಯೇಲರು ಐಗುಪ್ತ ದೇಶವನ್ನೂ, ಯಾಕೋಬನ ಮನೆತನದವರು ಅನ್ಯಜನಾಂಗವನ್ನು ಬಿಟ್ಟ ಮೇಲೆ,

2ಯೆಹೂದವು ದೇವರ ಪರಿಶುದ್ಧ ವಾಸಸ್ಥಾನವೂ, ಇಸ್ರಾಯೇಲ್ ಆತನ ರಾಜ್ಯವೂ ಆಯಿತು.

3ಸಮುದ್ರವು ಕಂಡು ಓಡಿಹೋಯಿತು; ಯೊರ್ದನ್ ಹೊಳೆಯು ಹಿಂದಿರುಗಿತು.

4ಪರ್ವತಗಳು ಟಗರುಗಳಂತೆಯೂ, ಗುಡ್ಡಗಳು ಕುರಿಮರಿಗಳಂತೆಯೂ ಹಾರಾಡಿದವು.

5ಸಮುದ್ರವೇ, ನಿನಗೇನಾಯಿತು? ಏಕೆ ಓಡಿ ಹೋಗುತ್ತೀ? ಯೊರ್ದನೇ, ಏಕೆ ಹಿಂದಿರುಗುತ್ತೀ?

6ಪರ್ವತಗಳೇ, ನೀವು ಟಗರುಗಳಂತೆಯೂ, ಗುಡ್ಡಗಳೇ, ನೀವು ಕುರಿಮರಿಗಳಂತೆಯೂ ಏಕೆ ಹಾರಾಡುತ್ತೀರಿ?

7ಭೂಲೋಕವೇ, ಕರ್ತನು ಪ್ರತ್ಯಕ್ಷನಾಗಿದ್ದಾನೆ, ಯಾಕೋಬನ ದೇವರು ನಿನ್ನ ಮುಂದೆ ಇದ್ದಾನೆ, ಕಂಪಿಸು.

8ಆತನು ಬಂಡೆಯನ್ನು ಕೆರೆಯನ್ನಾಗಿಯೂ, ಶಿಲೆಯನ್ನು ಬುಗ್ಗೆಯನ್ನಾಗಿಯೂ ಮಾರ್ಪಡಿಸುತ್ತಾನೆ.



 <<  Psalms 114 >> 


Bible2india.com
© 2010-2025
Help
Single Panel

Laporan Masalah/Saran