Bible 2 India Mobile
[VER] : [KANNADA]     [PL]  [PB] 
 <<  Psalms 54 >> 

1ದೇವರೇ, ನಿನ್ನ ನಾಮಮಹತ್ತಿನಿಂದ ನನ್ನನ್ನು ರಕ್ಷಿಸು; ನಿನ್ನ ಪರಾಕ್ರಮದಿಂದ ನನ್ನ ನ್ಯಾಯವನ್ನು ಸ್ಥಾಪಿಸು.

2ದೇವರೇ, ನನ್ನ ಪ್ರಾರ್ಥನೆಯನ್ನು ಲಾಲಿಸು; ನನ್ನ ಮಾತುಗಳಿಗೆ ಕಿವಿಗೊಡು.

3ಅನ್ಯರು ನನ್ನ ವಿರುದ್ಧವಾಗಿ ನಿಂತಿದ್ದಾರೆ; ಬಲಾತ್ಕಾರಿಗಳು ನನ್ನ ಪ್ರಾಣವನ್ನು ತೆಗೆಯಬೇಕೆಂದಿದ್ದಾರೆ. ಅವರು ದೇವರನ್ನು ಲಕ್ಷಿಸುವುದೇ ಇಲ್ಲ. ಸೆಲಾ

4ಇಗೋ, ದೇವರೇ ನನಗೆ ಸಹಾಯಕನು; ಕರ್ತನೇ ನನ್ನ ಪ್ರಾಣವನ್ನು ಕಾಪಾಡುವವನು.

5ನನ್ನ ಕೆಡುಕಿಗೆ ಸಮಯ ನೋಡುವವರು ತಾವೇ ಕೇಡನ್ನು ಅನುಭವಿಸಲಿ. ನೀನು ನಂಬಿಗಸ್ತನಲ್ಲವೇ; ಅವರನ್ನು ನಿರ್ಮೂಲಮಾಡು.

6ನಾನು ಸಂತೋಷದಿಂದ ನಿನಗೆ ಯಜ್ಞವನ್ನು ಸಮರ್ಪಿಸುವೆನು; ಉತ್ತಮೋತ್ತಮವಾಗಿರುವ ನಿನ್ನ ಹೆಸರನ್ನು ಕೊಂಡಾಡುವೆನು.

7ಏಕೆಂದರೆ ಯೆಹೋವನೇ, ನೀನು ನನ್ನನ್ನು ಸರ್ವ ಆಪತ್ತುಗಳಿಂದ ಬಿಡಿಸಿ, ನನ್ನ ಕಣ್ಣ ಮುಂದೆಯೇ ನನ್ನ ವೈರಿಗಳನ್ನು ಶಿಕ್ಷಿಸಿದ್ದಿ.


  Share Facebook  |  Share Twitter

 <<  Psalms 54 >> 


Bible2india.com
© 2010-2024
Help
Dual Panel

Laporan Masalah/Saran