Bible 2 India Mobile
[VER] : [KANNADA]     [PL]  [PB] 
 <<  2 Corinthians 13 >> 

1ನಾನು ನಿಮ್ಮ ಬಳಿಗೆ ಮೂರನೆಯ ಸಾರಿ ಬರುತ್ತಿದ್ದೇನೆ. <<ಯಾವ ದೂರಿದ್ದರೂ ಅದಕ್ಕೆ ಇಬ್ಬರು ಮೂವರು ಸಾಕ್ಷಿಗಳ ಆಧಾರವಿರಬೇಕು,>> ಎಂದು ಲಿಖಿತವಾಗಿದೆ.

2ನಾನು ಎರಡನೆಯ ಸಾರಿ ನಿಮ್ಮಲ್ಲಿದ್ದಾಗ ತಿರುಗಿ ಬಂದರೆ ನಿಮ್ಮನ್ನು ಶಿಕ್ಷಿಸದೆ ಬಿಡುವುದಿಲ್ಲವೆಂದು ಹೇಗೆ ಹೇಳಿದೆನೋ, ಹಾಗೆಯೇ ಈಗಲೂ ನಿಮಗೆ:ಪೂರ್ವ ಪಾಪಕೃತ್ಯಗಳನ್ನು ಇನ್ನೂ ನಡಿಸುವವರಿಗೂ ಮತ್ತು ಮಿಕ್ಕಾದವರೆಲ್ಲರಿಗೂ ಹೇಳುತ್ತೇನೆ.

3ಕ್ರಿಸ್ತನು ನನ್ನಲ್ಲಿ ಮಾತನಾಡುತ್ತಾನೆಂಬುವುದಕ್ಕೆ ನೀವು ಸಾಕ್ಷಿ ಕೇಳಿದ್ದರಿಂದ ನಾನು ಹೀಗೆ ಹೇಳುತ್ತೇನೆ. ಆತನು ನಿಮ್ಮನ್ನು ಕುರಿತು ದುರ್ಬಲನಾಗಿರದೆ ಶಕ್ತನೇ ಆಗಿದ್ದಾನೆ. ಬಲವಾದ ಕೆಲಸಗಳನ್ನು ನಿಮ್ಮಲ್ಲಿ ನಡಿಸುವವನಾಗಿದ್ದಾನೆ.

4ಆತನು ಬಲಹೀನಾವಸ್ಥೆಯಲ್ಲಿ ಶಿಲುಬೆಗೆ ಹಾಕಲ್ಪಟ್ಟನು ನಿಜ; ಆದರೂ ದೇವರ ಬಲದಿಂದ ಜೀವಿಸುವವನಾಗಿದ್ದಾನೆ. ನಾವೂ ಸಹ ಆತನ ಬಲಹೀನಾವಸ್ಥೆಯಲ್ಲಿ ಪಾಲುಗಾರರಾಗಿದ್ದೇವೆ, ಆದರೂ ಆತನೊಂದಿಗೆ ದೇವರ ಬಲದಿಂದ ನಿಮಗಾಗಿ ಬದುಕುವವರಾಗಿದ್ದೇವೆ.

5ನೀವು ಕ್ರಿಸ್ತ ನಂಬಿಕೆಯಲ್ಲಿ ಇದ್ದೀರೋ ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ, ನಿಮ್ಮನ್ನು ನೀವೇ ಪರಿಶೋಧಿಸಿಕೊಳ್ಳಿರಿ. ನೀವು ಒಳ್ಳೆಯವರಾಗಿದ್ದರೆ, ಯೇಸು ಕ್ರಿಸ್ತನು ನಿಮ್ಮಲ್ಲಿದ್ದಾನೆಂಬುದು ನಿಮಗೆ ತಿಳಿಯುವುದಿಲ್ಲವೋ? ಆತನು ನಿಮ್ಮಲ್ಲಿಲ್ಲದಿದ್ದರೆ ನೀವು ಆ ಪರೀಕ್ಷಿಗೆ ಒಳ್ಳಗಾದವರೇ.

6ನಾವಂತೂ ಆ ಪರೀಕ್ಷಿಗೆ ಒಳ್ಳಗಾದವರೆಂದು ನಿಮಗೆ ಗೊತ್ತಾಗುವುದೆಂಬುದಾಗಿ ನನಗೆ ಭರವಸೆವುಂಟು.

7ನೀವು ಕೆಟ್ಟದ್ದೇನೂ ಮಾಡಬಾರದೆಂದು ನಾವು ದೇವರನ್ನು ಪ್ರಾರ್ಥಿಸುತ್ತೇವೆ. ಇದರಲ್ಲಿ ನಾವೇ ಆ ಪರೀಕ್ಷಿಗೆ ಒಳ್ಳಗಾದವರೆಂದು ತೋರಿ ಬರಬೇಕೆಂಬುದು ನಮ್ಮ ಉದ್ದೇಶವಲ್ಲ. ನಾವು ಆ ಪರೀಕ್ಷಿಗೆ ಒಳ್ಳಗಾದವರೆನಿಸಿಕೊಂಡರೂ ನೀವು ಒಳ್ಳೆಯದನ್ನು ಮಾಡುವವರಾಗಬೇಕೆಂಬುದೇ ನಮ್ಮ ಉದ್ದೇಶ.

8ಸತ್ಯಕ್ಕೆ ವಿರೋಧವಾಗಿ ನಾವೇನೂ ಮಾಡಲಾರೆವು, ಸತ್ಯಾಭಿವೃದ್ದಿಗೋಸ್ಕರವೇ ಸಮಸ್ತವನ್ನು ಮಾಡುತ್ತೇವೆ.

9ನಾವು ಬಲಹೀನರಾಗಿದ್ದರೂ ನೀವು ಬಲಿಷ್ಠರಾಗಿದ್ದ ಪಕ್ಷಕ್ಕೆ ಸಂತೋಷಪಡುತ್ತೇವೆ; ಇದಲ್ಲದೆ ನೀವು ಪೂರ್ಣ ಕ್ರಮಕ್ಕೆ ಬರಬೇಕೆಂದು ಪ್ರಾರ್ಥಿಸುತ್ತೇವೆ.

10ಇದಕ್ಕಾಗಿಯೇ ನಾನು ನಿಮ್ಮಲ್ಲಿ ಇಲ್ಲದಿರುವಾಗಲೇ ನಿಮ್ಮನ್ನು ಕೆಡವಿಹಾಕುವುದಕ್ಕಲ್ಲ ಬದಲಾಗಿ ಕಟ್ಟುವುದಕ್ಕಾಗಿಯೇ ಬರೆದಿದ್ದೇನೆ. ಕರ್ತನು ನನಗೆ ಕೊಟ್ಟಿರುವ ಅಧಿಕಾರದ ಪ್ರಯೋಗದಲ್ಲಿ ನಿಮ್ಮ ಬಳಿಗೆ ಬಂದಾಗ ಕಾಠಿಣ್ಯವನ್ನು ತೋರಿಸುವುದಕ್ಕೆ ಅವಕಾಶವಿರಬಾರದೆಂದು ಇದನ್ನು ಬರೆಯುತ್ತಿದ್ದೇನೆ.

11ಕಡೆಯದಾಗಿ ಪ್ರಿಯರೇ, ಸಂತೋಷಪಡಿರಿ! ಕ್ರಮಪಡಿಸಿಕೊಳ್ಳಿರಿ. ಧೈರ್ಯವುಳ್ಳವರಾಗಿರಿ, ಏಕ ಮನಸ್ಸುಳ್ಳವರಾಗಿರಿ, ಸಮಾಧಾನದಿಂದ ಇರಿ; ಆಗ ಪ್ರೀತಿಸ್ವರೂಪನೂ, ಶಾಂತಿದಾಯಕನೂ ಆದ ದೇವರು ನಿಮ್ಮ ಸಂಗಡ ಇರುವನು.

12ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ.

13ದೇವಜನರೆಲ್ಲರೂ ನಿಮಗೆ ವಂದನೆ ಹೇಳುತ್ತಾರೆ.

14ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯೂ, ದೇವರ ಪ್ರೀತಿಯೂ, ಪವಿತ್ರಾತ್ಮನ ಅನ್ಯೋನ್ಯತೆಯೂ ನಿಮ್ಮೆಲ್ಲರ ಸಂಗಡವಿರಲಿ.


  Share Facebook  |  Share Twitter

 <<  2 Corinthians 13 >> 


Bible2india.com
© 2010-2024
Help
Dual Panel

Laporan Masalah/Saran