Bible 2 India Mobile
[VER] : [KANNADA]     [PL]  [PB] 
 <<  Ezra 2 >> 

1ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನಿಂದ ಬಾಬೆಲಿಗೆ ಸೆರೆ ಒಯ್ಯಲ್ಪಟ್ಟವರಲ್ಲಿ ಯೆರೂಸಲೇಮಿಗೂ ಯೆಹೂದಪ್ರಾಂತ್ಯದ ಸ್ಚಂತ ಪಟ್ಟಣಗಳಿಗೂ ಸೆರೆಯಿಂದ ಹಿಂತಿರುಗಿ ಬಂದ [ಯೆಹೂದ] ಸಂಸ್ಥಾನದವರ ಖಾನೇಷುಮಾರಿ.

2ಅವರು ಜೆರುಬ್ಬಾಬೆಲ್, ಯೇಷೂವ, ನೆಹೆಮೀಯ, ಸೆರಾಯ, ರೆಗೇಲಾಯ, ಮೊರ್ದೆಕೈ, ಬಿಲ್ಷಾನ್, ಮಿಸ್ಪಾರ್, ಬಿಗ್ವೈ, ರೆಹೂಮ್ ಮತ್ತು ಬಾಣ ಎಂಬ ನಾಯಕರೊಡನೆ ಹಿಂತಿರುಗಿ ಬಂದವರು:

3ಪರೋಷಿನವರು 2,172

4ಶೆಫಟ್ಯನವರು 372

5ಆರಹನವರು 775

6ಪಹತ್ ಮೋವಾಬಿನವರಾದ ಯೇಷೂವ ಮತ್ತು ಯೋವಾಬ್ ಸಂತಾನದವರು 2,812

7ಏಲಾಮಿನವರು 1,254

8ಜತ್ತೂವಿನವರು 945

9ಜಕ್ಕೈಯವರು 760

10ಬಾನೀಯವರು 642

11ಬೇಬ್ಯೆಯವರು 623

12ಅಜ್ಗಾದಿನವರು 1,222

13ಅದೋನೀಕಾಮಿನವರು 666

14ಬಿಗ್ವೈಯವರು 2,056

15ಆದೀನನವರು 454

16ಆಟೇರಿನವರಾದ ಹಿಜ್ಕೀಯನ ಸಂತಾನದವರು 98

17ಬೇಚೈಯವರು 323

18ಯೋರನವರು 112

19ಹಾಷುಮಿನವರು 223

20ಗಿಬ್ಬಾರಿನವರು 95

21ಬೇತ್ಲೆಹೇಮಿನವರು 123

22ನೆಟೋಫ ಊರಿನವರು 56

23ಅನಾತೋತ್ ಊರಿನವರು 128

24ಅಜ್ಮಾವೆತಿನವರು 42

25ಕಿರ್ಯತ್ಯಾರೀಮ್, ಕೆಫೀರ ಮತ್ತು ಬೇರೋತ್ ಊರುಗಳವರು 743

26ರಾಮಾ ಮತ್ತು ಗೆಬ ಊರುಗಳವರು 621

27ಮಿಕ್ಮಾಸಿನವರು 122

28ಬೇತೇಲ್ ಮತ್ತು ಆಯಿ ಎಂಬ ಊರುಗಳವರು 223

29ನೆಬೋವಿನವರು 52

30ಮಗ್ಬೀಷಿನವರು 156

31ಬೇರೆ ಏಲಾಮಿನವರು 1,254

32ಹಾರಿಮನವರು 320

33ಲೋದ್, ಹಾದೀದ್ ಮತ್ತು ಓನೋ ಎಂಬ ಊರುಗಳವರು 725

34ಯೆರಿಕೋವಿನವರು 345

35ಸೆನಾಹನವರು 3,630

36ಯಾಜಕರಲ್ಲಿ - ಯೆದಾಯನವರಾದ ಯೇಷೂವನ ಮನೆಯವರು 973

37ಇಮ್ಮೇರನವರು 1,052

38ಪಷ್ಹೂರನವರು 1,247

39ಹಾರಿಮನವರು 1,017

40ಲೇವಿಯರಲ್ಲಿ: ಹೋದವ್ಯನವರಾದ ಯೇಷೂವ ಮತ್ತು ಕದ್ಮೀಯೇಲ್ ಇವರ ಸಂತಾನದವರು 74

41ಗಾಯಕರಲ್ಲಿ: ಆಸಾಫ್ಯರು 128

42ದ್ವಾರಪಾಲಕರ ಸಂತಾನದವರು: ಶಲ್ಲೂಮ್ ಸಂತಾನದವರು, ಆಟ್ಟೇರ್, ಟಲ್ಮೋನ್, ಅಕ್ಕೂಬ್, ಹಟೀಟ ಮತ್ತು ಶೋಬೈ ಇವರು ಒಟ್ಟು 139.

43ದೇವಸ್ಥಾನದಾಸರಲ್ಲಿ: ಜೀಹ ಸಂತಾನದವರು ಮತ್ತು ಹಸೂಫ, ಟಬ್ಬಾವೋತ್,

44ಕೇರೋಸ್, ಸೀಯಹಾ, ಪಾದೋನ್,

45ಲೆಬಾನ, ಹಗಾಬ, ಅಕ್ಕೂಬ್,

46ಹಾಗಾಬ, ಶಮ್ಲೈ, ಮತ್ತು ಹಾನಾನ್,

47ಗಿದ್ದೇಲನ ಸಂತಾನದವರು, ಗಹರ್, ರೆವಾಯ,

48ರೆಚೀನ್, ನೆಕೊದ, ಗಜ್ಜಾಮ್,

49ಉಜ್ಜ, ಪಾಸೇಹ, ಬೇಸೈ,

50ಅಸ್ನ, ಮೆಗೂನೀಮ್ ಮತ್ತು ನೆಫೀಸೀಮ್,

51ಬಕ್ಬೂಕ್ ಸಂತಾನದವರು, ಹಕ್ಕೂಫ, ಹರ್ಹೂರ್,

52ಬಚ್ಲೂತ್, ಮೆಹೀದ, ಹರ್ಷ,

53ಬರ್ಕೋಸ್, ಸೀಸೆರ, ತೆಮಹ,

54ನೆಚೀಹ ಮತ್ತು ಹಟೀಫ.

55ಸೊಲೊಮೋನನ ದಾಸರ ಸಂತಾನದವರು; ಸೋಟೈ ಸಂತಾನದವರು, ಹಸ್ಲೋಫೆರೆತ್, ಪೆರೂದ,

56ಯಾಲ, ದರ್ಕೋನ್ ಗಿದ್ದೇಲ್,

57ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್ ಮತ್ತು ಆಮಿ.

58ಎಲ್ಲಾ ಸಂತಾನದವರನ್ನು ದೇವಸ್ಥಾನದ ಸೇವೆಗಾಗಿ ನೇಮಿಸಿದರು ಮತ್ತು ಸೊಲೊಮೋನನ ದಾಸರೂ ಒಟ್ಟು 392.

59ಉಳಿದ ತೇಲ್ಮೆಲಹ, ತೇಲ್ಹರ್ಷ, ಕೆರೂಬ, ಅದ್ದಾನ್ ಮತ್ತು ಇಮ್ಮೇರ್ ಎಂಬ ಊರುಗಳಿಂದ ಬಂದವರಾಗಿ ತಮ್ಮ ಗೋತ್ರವಂಶಾವಳಿಗಳನ್ನು ತೋರಿಸಿದರು.

60ಆದರೂ ತಾವು ಇಸ್ರಾಯೇಲರೆಂಬುದನ್ನು ಸ್ಥಾಪಿಸಿಲಾರದವರಾದ ದೆಲಾಯ, ಟೋಬೀಯ ಮತ್ತು ನಕೋದ ಇವರ ಸಂತಾನದವರು 652.

61ಯಾಜಕರಲ್ಲಿ: ಹಬಯ್ಯ, ಹಕ್ಕೋಜ್ ಮತ್ತು ಬರ್ಜಿಲ್ಲೈ ಇವರ ಸಂತಾನದವರು. (ಈ ಬರ್ಜಿಲ್ಲೈ ಎಂಬವನು ಗಿಲ್ಯಾದ್ಯನಾದ ಬರ್ಜಿಲ್ಲೈಯ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಮದುವೆಮಾಡಿಕೊಂಡು ಅವನ ಹೆಸರನ್ನೂ ಇಟ್ಟುಕೊಂಡಿದ್ದನು.)

62ಇವರು ತಮ್ಮ ವಂಶಾವಳಿಯ ಪತ್ರಗಳನ್ನು ಹುಡುಕಿದರೂ ಅವು ಸಿಕ್ಕದ ಕಾರಣ ಅಶುದ್ಧರೆಂದು ಯಾಜಕೋದ್ಯೋಗದಿಂದ ತಿರಸ್ಕರಿಸಲ್ಪಟ್ಟರು.

63ಊರೀಮ್ ಮತ್ತು ತುಮ್ಮೀಮುಗಳ ಮೂಲಕ ದೈವನಿರ್ಣಯವನ್ನು ತಿಳಿಸಬಲ್ಲವನಾದ ಯಾಜಕನು ಬರುವ ತನಕ ಇವರು ಮಹಾಪರಿಶುದ್ಧ ಪದಾರ್ಥಗಳಲ್ಲಿ ಭೋಜನ ಮಾಡಬಾರದೆಂಬುದಾಗಿ ದೇಶಾಧಿಪತಿಯು ತೀರ್ಪುಮಾಡಿದನು.

64ಸರ್ವಸಮೂಹದವರ ಒಟ್ಟು ಸಂಖ್ಯೆಯು ನಲ್ವತ್ತೆರಡು ಸಾವಿರದ ಮುನ್ನೂರ ಆರವತ್ತು.

65ಈ ಸಂಖ್ಯೆಯಲ್ಲಿ ಲೆಕ್ಕಿಸಲ್ಪಡದ ಅವರ ದಾಸದಾಸಿಯರು ಏಳು ಸಾವಿರದ ಮುನ್ನೂರ ಮೂವತ್ತೇಳು ಜನರು. ಅವರಲ್ಲಿ ಗಾಯಕರೂ, ಗಾಯಕಿಯರೂ ಇನ್ನೂರು ಜನರು ಇದ್ದರು.

66ಅವರಿಗೆ ಏಳು ನೂರ ಮೂವತ್ತಾರು ಕುದುರೆಗಳೂ, ಇನ್ನೂರ ನಲ್ವತ್ತೈದು ಹೇಸರಕತ್ತೆಗಳೂ,

67ನಾನೂರ ಮೂವತ್ತೈದು ಒಂಟೆಗಳೂ, ಆರು ಸಾವಿರದ ಏಳು ನೂರ ಇಪ್ಪತ್ತು ಕತ್ತೆಗಳೂ ಇದ್ದವು.

68ಗೋತ್ರಪ್ರಧಾನರಲ್ಲಿ ಕೆಲವರು ಯೆರೂಸಲೇಮಿನಲ್ಲಿ ಯೆಹೋವನ ಆಲಯವಿದ್ದ ಸ್ಥಳಕ್ಕೆ ಬಂದಾಗ ದೇವಾಲಯವನ್ನು ಪುನಃ ಅದರ ಸ್ಥಳದಲ್ಲಿ ಕಟ್ಟುವುದಕ್ಕೋಸ್ಕರ ಕಾಣಿಕೆಗಳನ್ನು ಕೊಟ್ಟರು.

69ಅವರು ತಮ್ಮ ಸಾಮರ್ಥ್ಯಾನುಸಾರವಾಗಿ ಕಟ್ಟಡದ ಭಂಡಾರಕ್ಕೆ ಕೊಟ್ಟದ್ದು ಅರುವತ್ತೊಂದು ಸಾವಿರ ಬಂಗಾರದ ಪವನುಗಳು, ಎರಡು ಲಕ್ಷದ ಐವತ್ತು ಸಾವಿರ ತೊಲ ಬೆಳ್ಳಿ ಮತ್ತು ನೂರು ಯಾಜಕವಸ್ತ್ರಗಳು.

70ದೇವಸ್ಥಾನದ ಸೇವೆಗಾಗಿ ಇದ್ದ ಯಾಜಕರು, ಲೇವಿಯರು, ಗಾಯಕರು, ದ್ವಾರಪಾಲಕರು ಮತ್ತು ಸಾಧಾರಣಜನರಲ್ಲಿ ಕೆಲವರು ಅವರವರಿಗೆ ನೇಮಕವಾದ ಪಟ್ಟಣಗಳಲ್ಲಿ ವಾಸಿಸಿದರು; ಬೇರೆ ಎಲ್ಲಾ ಇಸ್ರಾಯೇಲರು ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸಿದರು.



 <<  Ezra 2 >> 


Bible2india.com
© 2010-2024
Help
Single Panel

Laporan Masalah/Saran